ಮೂಲಾನಕ್ಷತ್ರದಲ್ಲಿ ಮನೆಯ ಸಾರಣೆಯ ಮಾಡಿ,
ಜೇಷ್ಠಾನಕ್ಷತ್ರದ ಬರವ ಹಾರೈಸಿ ಬಂದಲ್ಲಿ
ಶ್ರವಣಾನಕ್ಷತ್ರಗೂಡಿ ಗಾಳಿಯನೈದಿತ್ತು.
ಪೂರ್ವದಿಕ್ಕಿಲಿ ಹಸ್ತಾನಕ್ಷತ್ರವೊಡ್ಡಿಬಂದುದ ಮೇಲೆ
ಊತ್ತರಾ ನಕ್ಷತ್ರದಿಂ ನೋಡಿ ಬಂದು,
ಶತತಾರೆ ಆರಿದ್ರಿ ಬೆದೆಯನರಿದು
ಮೂರು ತಾಳಿನ ಕೂರಿಗೆಯಲ್ಲಿ ಬಿತ್ತಲು
ಪುನರ್ವಸುನಕ್ಷತ್ರ ವೃಷ್ಟಿಗರೆಯಿತ್ತು.
ಭೂಮ್ಯಾದಿ ಸಕಲ ಸಂಪು ತಂಪುಗೊಂಡಿತ್ತು.
ಪೈರು ವಿಚಿತ್ರ ಬೆಳೆ ನಿಂದಿತ್ತು ಹುಬ್ಬಿನಕ್ಷತ್ರದಲ್ಲಿ.
ಉತ್ರಿ ಚಿತ್ತಿ ಸ್ವಾತಿಯಾದರೆ
ಗುರುನಿರಂಜನ ಚನ್ನಬಸವಲಿಂಗಕ್ಕೆ ದಾಸೋಹ
ಸಮನಿಸಿತ್ತು.