Index   ವಚನ - 1020    Search  
 
ಆಚಾರವೇ ಪ್ರಾಣವಾದ ಅನಿಮಿಷಲಿಂಗ ಕರಸ್ಥಲವಾದ ಅಪ್ರತಿಮ ಶರಣಂಗೆ ಮಾಯಾಮೋಹ ವಿಷಯಗತಿ ಸುಖಪ್ರಾಣವಾದ, ಜೀವಭಾವಸ್ವರೂಪ ನಿಲವಾದ ಭ್ರಮಿತ ನರ ಸರಿಯಪ್ಪನೆ? ಮತ್ತೆ ಸರಿಯೆಂದರೆ ದೊರೆನರಕ ತಪ್ಪದು ಗುರುನಿರಂಜನ ಚನ್ನಬಸವಲಿಂಗಾ.