Index   ವಚನ - 1023    Search  
 
ತನುವಿನಂತೆ ತನು, ಮನದಂತೆ ಮನ, ಪ್ರಾಣದಂತೆ ಪ್ರಾಣ, ಭಾವದಂತೆ ಭಾವ, ನಡೆಯಂತೆ ನಡೆ, ನುಡಿಯಂತೆ ನುಡಿ, ಹೇಗೆ ಇರ್ದಂತೆ ಹಾಗೆ ಇರ್ದು ನಾವು ಆದಿಯಿಂದೆ ಅನಾದಿಯ ಕಂಡೆವು. ಅನುಪಮ ಗತಿಮತಿಗಳೆಂಬ ನುಡಿ ನಿಮ್ಮನು ತೊರೆಯದಿಹವೆ? ಕಿಚ್ಚಿನೊಳಗಿಕ್ಕದಿಹವೆ? ಪಿಶಾಚಿಯ ಮಾಡದಿಹವೆ? ಭ್ರಮಣಗೊಳಿಸದಿಹವೆ? ದುರ್ಗತಿಗಿಕ್ಕದಿಹವೆ? ನಾಲಿಗೆಯ ಸೀಳದಿಹವೆ? ನುಡಿದಂತೆ ಹಿಡಿದು ನಡೆವರೆ ಶರಣರೆಂಬೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.