Index   ವಚನ - 1025    Search  
 
ಹೊಡೆಗೆಡದಧೋಗತಿಗೊಂಡು ಅನೃತವಸರಕ್ಕಾಯತವಾದ ವೃಷೀಕಂಗಳ ಸ್ವಾಯತವಾಗಿ, ನಿಜನಿಯತ ಚರಿತೆಯ ಸಾರಾಯವ ನೋಡಲಗಣಿತ ಕಾಣಾ, ಮಾಡಲಮ್ಮೆ ನೋಡಾ. ಹಿಡಿತಿಗೆ ಬಿಡಿತ ಮುಂದುಗೊಂಡಿಪ್ಪುದು, ಬಿಡಿತಿಗೆ ಬಂಧನ ಮುಂದುಗೊಂಡಿಪ್ಪುದು, ಬಂಧನಕ್ಕೆ ಭವರಾಟಣ ನಿಜವಾಗಿಪ್ಪುದು, ಗುರುನಿರಂಜನ ಚನ್ನಬಸವಲಿಂಗಾ ನೀವು ಸಾಕ್ಷಿಯಾಗಿಪ್ಪಿರಿ.