Index   ವಚನ - 1032    Search  
 
ಬರಿಕೋಟಲೆ ಹಿರಿದುಳ್ಳ ಹೆಸರುವಂತರಿಗೆ ಹರಿದುಮಾಡುವ ಉಪದೇಶವು ಪರಿವಿಡಿಯಲೆಳತಟಕ್ಕೆಳಸುವುದು, ಮಾಡಲಾಗದು ಜ್ಞಾನಿಗಳು. ನೋಡಿಕೊಳ್ಳಲಾಗದು ತನುಮನಧನವ. ಅದೇನುಕಾರಣವೆಂದೊಡೆ, ಹಾಲನೆರೆದು ಹಾವಿನ ಬಾಲವ ಪಿಡಿದಾಡುವ ಮರುಳನಂತೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.