Index   ವಚನ - 1066    Search  
 
ನವರತ್ನಕ್ಕೆ ಬಂಗಾರವ ತೆತ್ತಿಸಿ ಕಳಂಕರಹಿತತ್ವಚರಿತೆಯಿಂದೆ ವ್ಯವಹಾರವ ಮಾಡಿಕೊಳ್ಳಬಲ್ಲಾತನೆ ಶರಣ. ಕುಲಾಲ ಕೀಟಕನಂತೆ ಸಕಲಸಂಭ್ರಮದಲ್ಲಿ ತೋರಬಲ್ಲಾತನೆ ಶರಣ, ಘನಸಾರ ಜ್ವಾಲೆ ಸಂಪರ್ಕ ಸ್ವಯವಾಗಿರಬಲ್ಲಾತನೇ ಶರಣ. ಈ ತ್ರಿವಿಧದ ಭೇದವನರಿದು ಮರೆದಿಪ್ಪ ಮಹಾಘನವ ಗುರುನಿರಂಜನ ಚನ್ನಬಸವಲಿಂಗದಲ್ಲಿಯೇ ಕಾಣಲಾಯಿತ್ತು.