Index   ವಚನ - 1081    Search  
 
ನಿರಾಕಾರ ಲಿಂಗವೆನ್ನ ಸ್ಥೂಲತತ್ವದ ವ್ಯವಹಾರವನು ಜಾಗ್ರಾವಸ್ಥೆಯಲ್ಲಿ ಕ್ರಿಯಾಗಮ್ಯನಾಗಿ ಆನಂದಿಸುವಲ್ಲಿ ನಾನು ಸತಿಭಾವದಿಂದ ನಗುತಿರ್ದೆನು. ನಿರಾಮಯ ಲಿಂಗವೆನ್ನ ಸೂಕ್ಷ್ಮತತ್ವದ ವ್ಯವಹಾರವನು ಸ್ಪಪ್ನಾವಸ್ಥೆಯಲ್ಲಿ ಜ್ಞಾನಗಮ್ಯನಾಗಿ ಪರಿಣಾಮಿಸುವಲ್ಲಿ ನಾನು ಸತಿಭಾವದಿಂದೆ ನಗುತಿರ್ದೆನು. ನಿರವಯ ಲಿಂಗವೆನ್ನ ಕಾರಣತತ್ವದ ವ್ಯವಹಾರವನು ಸುಷುಪ್ತಾವಸ್ಥೆಯಲ್ಲಿ ಭಾವಗಮ್ಯನಾಗಿ ಆಸ್ವಾದಿಸುವಲ್ಲಿ ನಾನು ಸತಿಭಾವದಿಂದೆ ನಗುತಿರ್ದೆನು. ಗುರುನಿರಂಜನ ಚನ್ನಬಸವಲಿಂಗವೆಂಬ ಷಟ್‍ಸ್ಥಲಸಂಭೋಗಿ ಸ್ವಯವಾದಲ್ಲಿ ನಗುತಿರ್ದೆನು.