Index   ವಚನ - 1083    Search  
 
ಮಣ್ಣುಕೋಟೆಯೊಳಗೆ ಕಲ್ಲಮಂದಿರದಿ ಮೂರ್ತಿಯನಿರಿಸಿ ನಡೆವ ಬದ್ಧಹಿರಿಯರ ಸದ್ದು ಸಮಯದ ಸಾರಾಯಕ್ಕತೀತ ಮತ್ತೆ ದ್ವಂದ್ವದನುಗುಣಾಗಮ್ಯ ಶಿವಾನುಭಾವಿ ಸಾಕಾರ ಸನುಮತ ನಿರಾಕಾರ ನಿಜಾನಂದ ಕಾರ್ಯಕಾರಣ ನಿರಂಜನನಿಧಿ ಗುರುನಿರಂಜನ ಚೆನ್ನಬಸವಲಿಂಗಾ ನಿಮ್ಮ ಶರಣ.