Index   ವಚನ - 1087    Search  
 
ಕಾಡಡವಿಯ ಕಡೆಯನರಿಯದ ಹಾರುವನ ತಲೆಯನುರುಹಿ ಬಲೆಯಬಂಧನವ ಕಡಿದು, ಅಂದಿನತ್ತವ ತಂದು ತಲೆಕಾಲವಿಡಿದು ತರ್ಕೈಸಲಾಗಿ ತಲೆಯುರಿ ತಾಗಿ ಮುಸುಗಿತ್ತು ನೋಡಾ. ತಲೆಕಾಲು ಕೈಯ ನುಸುಳಿ ಕಡೆಗಾದುದರಿಯದೆ ಕಂಡ ಭಾವವರತು ನಿಂದುದು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.