ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ಗುಣವರ್ಗ ಊರ್ಮಿ ಭೂತೇಂದ್ರಿಯ ಕರಣವಿಷಯಾದಿ
ಸಕಲನಿಃಕಲವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ತನುತ್ರಯ ಮಲತ್ರಯ ಈಷಣತ್ರಯ
ಜೀವತ್ರಯ ಅವಸ್ಥಾತ್ರಯವೆಂಬ
ಪಂಚಾದಶ ಮಾಯಾಪಟಲಾದಿ ತಾಮಸವೆಲ್ಲ ಹುಸಿಯೆಂಬುದ
ಕಂಡೆಯಲ್ಲ ಮೂಗಣ್ಣಿಂದೆ.
ಕಂಡೆ ಕಾಣೆ ಬೇಕು ಬೇಡ ನಾನು ನೀನೆಂಬ
ದ್ವಂದ್ವಕರ್ಮದ ಕತ್ತಲೆ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ.
ಇಂತಿವೆಲ್ಲ ಕಂಡ ಕಾಣಿಕೆ ನಿಶ್ಚಯವಾದಲ್ಲಿ
ನಿಜ ನಿರ್ವಾಣದ ನಿಲವು ನೀನೆಂಬೆ
ಗುರುನಿರಂಜನ ಚನ್ನಬಸವಲಿಂದಲ್ಲಿ.
Art
Manuscript
Music
Courtesy:
Transliteration
Aṅga mana prāṇa husiyembuda kaṇḍeyalla mūgaṇṇinde.
Guṇavarga ūrmi bhūtēndriya karaṇaviṣayādi
sakalaniḥkalavella husiyembuda kaṇḍeyalla mūgaṇṇinde.
Tanutraya malatraya īṣaṇatraya
jīvatraya avasthātrayavemba
pan̄cādaśa māyāpaṭalādi tāmasavella husiyembuda
kaṇḍeyalla mūgaṇṇinde.
Kaṇḍe kāṇe bēku bēḍa nānu nīnemba
dvandvakarmada kattale husiyembuda kaṇḍeyalla mūgaṇṇinde.
Intivella kaṇḍa kāṇike niścayavādalli
nija nirvāṇada nilavu nīnembe
guruniran̄jana cannabasavalindalli.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು