Index   ವಚನ - 1103    Search  
 
ಕಬ್ಬುನವನರಸಿದರೆ ಪರುಷಭಾವ ತಪ್ಪಿತ್ತು. ಕಾಷ್ಠವನರಸಿದರೆ ಅಗ್ನಿಭಾವ ತಪ್ಪಿತ್ತು. ನರಜಿಹ್ವೆಯನರಸಿದರೆ ಶರ್ಕರಭಾವ ತಪ್ಪಿತ್ತು ಇದು ಕಾರಣ ಇಹಪರವನರಸಿದರೆ ಶರಣಭಾವ ತಪ್ಪಿತ್ತು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.