Index   ವಚನ - 1105    Search  
 
ಮಾಟಕೂಟದ ಭಾವಶೂನ್ಯತ್ವವನರಿದ ಬಳಿಕ ಮಾಡಲೆಡೆಗಾಣದಿರಬೇಕು, ಕೂಡಲರಿಯದಿರಬೇಕು. ಫಲವೃಕ್ಷಾಳಿಯ ಗೆಲ್ಲ ಸೋಲಿನಂತೆ ಸರ್ವಕ್ಕು ನಿಃಕಲಭಾವ ನೆನಸಿರಬೇಕು. ಕುರುಹರಿತ ನಿರುತ ನೀನೆಂಬೆ ಗುರುನಿರಂಜನ ಚನ್ನಬಸವಲಿಂಗಾ.