Index   ವಚನ - 1107    Search  
 
ಬೆಂದವ ಬೇಯಿಸಬಂದವರ ನಿಂದವರ ನಿಲಿಸಬಂದವರ ಸತ್ತವರ ಕೊಂದು ಕಂಗಳನೀರ ತಲೆಗೆ ಎರೆದವರ, ಕೈಯೊಳು ಕೈಭಾಷೆಯನಿತ್ತು ಕಡೆಗಾಣಿಸಿಕೊಂಡವರ ನಡೆಗತಿಯ ಮಂಡೆಯೊಳಿಟ್ಟು ಸಡಗರದ ಸುಖದ ಸೊನ್ನೆಯಲ್ಲಿ ಸಯವಾದೆ ಗುರುನಿರಂಜನ ಚನ್ನಬಸವಲಿಂಗದಾದಿಯ ಪಡೆದವರ.