Index   ವಚನ - 1109    Search  
 
ತಾಯಿ ಮಗಳ ಸಂಗವ ಮಾಡಿ ತಂದೆಗೆ ಹುಟ್ಟಿದ ಮಗನ ಕೈಯೊಳೆತ್ತಿ ಊರಬಿಟ್ಟು ಕಡೆಗೆ ಬರುವಲ್ಲಿ, ಕಾಡಬಂದವರಾರು ಕೂಡಬಂದರು ನೋಡಾ. ಕೆಡಿಸಬಂದವರಾರು ನುಡಿಸಬಂದರು ಕಾಣಾ. ಸುಖಿಸಬಂದವರಾರು ಸುಳಿದುನಿಂದರು ಕೇಳಾ. ಗೋಮಕ್ಕಳೆಲ್ಲರು ಗುಲಾಮರಾದಲ್ಲಿ ಗಸಣಿಯಡಗಿತ್ತು. ಗುರುನಿರಂಜನ ಚನ್ನಬಸವಲಿಂಗಕ್ಕೆ ಸೆರಗ ಹಾಸಿದರೆ ಮರಳಿ ಹೇಳದ ಸುಖವೆನಗೆ ಸ್ವಯವಾಯಿತ್ತು.