Index   ವಚನ - 1111    Search  
 
ಘನಸಾರ ಹೇಮ ಮೌಕ್ತಿಕಕ್ಕೆ ಮೊದಲಿಲ್ಲದಂತೆ ತೋರಿದಡಾತನೆಂಬೆ. ಉದಕದಂತಿರ್ದು ವಹ್ನಿಯಂತಾದೊಡಾತನೆಂಬೆ. ದಗ್ಧಪಟದ ನಿಲುವು ಸರ್ವಕ್ಕೂ ತೋರಿದಡಾತನೆಂಬೆ, ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬ ಅನುಪಮಶರಣ.