Index   ವಚನ - 1129    Search  
 
ಭೂಲೋಕದೊಳಗೆ ನಾಗಗನ್ನೆಯ ನಿದ್ರೆಯ ಕೆಡಿಸಿ ಭಾವಿಸಿದರೆ ದೇವಲೋಕದ ಕನ್ಯೆಯಿವಳು ನೋಡಾ! ತಾನೊಮ್ಮೆ ನೆಲ ನೀರು ಬೆಂಕಿ ಗಾಳಿಯ ತನ್ನೊಳಗೆ ಹಿಡಿಯದೆ ಹಿಡಿದು ಬೇಟಕವಾಗಿ ನೋಡುತಿರಲು ಕೂಟದ ಕುರುಹಳಿದ ಸುಖಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.