Index   ವಚನ - 1132    Search  
 
ಅಯ್ಯಾ, ಸೊಸೆಯೆಂದರಿಯಬಾರದು, ಮಗಳೆಂದರಿಯಬಾರದು, ಹಂಡೆತಿಯೆಂದರಿಯಬಾರದು, ತಾಯಿಯೆಂದರಿಯಬಾರದು ಇದೇನು ಹೇಳಾ? ಅಳಿಯನೆಂದರಿಯಬಾರದು, ಮಗನೆಂದರಿಯಬಾರದು, ಮಾವನೆಂದರಿಯಬಾರದು, ತಂದೆಯೆಂದರಿಯಬಾರದು ಇದೇನು ಹೇಳಾ? ಹಾಳೂರ ಸುಟ್ಟು ಬಾಳುವೆಯ ಮಾಡಿ ಕುಲಗೆಟ್ಟು ಕೋಳುವೋದರು. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮಂತೆ ನಿಮ್ಮಂಗದ ಮಹಿಮೆ.