ಪೃಥ್ವಿಯ ಮೇಲೊಂದು
ಪರಮಶಾಂತಿ ಎಂಬ ಪರ್ವತವ ಕಂಡೆ.
ಆ ಪರ್ವತದ ಮೇಲೆ ಪರಮಗುರು
ಪರಿಯಾಯವಾಯಿತ್ತ ಕಂಡೆ.
ಆ ಪರಿಯಾಯ ಗುರು ಒಂದು ಕಥನದಿಂದ
ದೃಷ್ಟಿ ತೆರೆಯಿತ್ತ ಕಂಡೆ.
ಆ ದೃಷ್ಟಿಯ ಬೆಳಗಿನಿಂದ ನೆತ್ತಿಯ ಕಲಶ
ಪುಟದೋರುತ್ತ ನಡೆದು ಸಸಿಯಾಯಿತ್ತ ಕಂಡೆ.
ಆ ಸಸಿಯ ಕೆಳಗಣ ಮೃತ್ತಿಕೆ,
ಭಕ್ತರಿಗೆ ಮೂರಾಯಿತ್ತ ಕಂಡೆ ಗುಹೇಶ್ವರಾ
Transliteration Pr̥thviya mēlondu
paramaśānti emba parvatava kaṇḍe.
Ā parvatada mēle paramaguru
pariyāyavāyitta kaṇḍe.
Ā pariyāya guru ondu kathanadinda
dr̥ṣṭi tereyitta kaṇḍe.
Ā dr̥ṣṭiya beḷagininda nettiya kalaśa
puṭadōrutta naḍedu sasiyāyitta kaṇḍe.
Ā sasiya keḷagaṇa mr̥ttike,
bhaktarige mūrāyitta kaṇḍe guhēśvarā
Hindi Translation पृथ्वि पर एक परमशांति जैसे पर्वत देखा।
उस पर्वत पर परमगुरु अनुक्रम हुआ था देखा।
उस अनुक्रम का गुरु एक कथन से दृष्टि खोले हुआ था देखा।
उस दृष्टि के प्रकाश से मस्तक कलश उछलते शोभा दिखाते चलकर
पौधा हुआ था देखा।
उस पौधे के नीचे की मृत्तिका,
भक्तों को तीन बने देखा गुहेश्वरा ।
Translated by: Eswara Sharma M and Govindarao B N