Index   ವಚನ - 1148    Search  
 
ನೀರಜದೊಳಗೊಂದು ಮಾರ್ಜಾಲ ಹುಟ್ಟಿ ಮೂರುಲೋಕವ ನುಂಗಿತ್ತು ನೋಡಾ. ನುಂಗಿದ ಪ್ರಾಣಿಗಳ ಹಿಂಗಿಸಿ ನೋಡಿದರೆ ಸಂಗ್ರಹಕ್ಕೆ ಸಯವಾದವು. ಸಂಗ್ರಹ ಸವೆದು ಶರಧಿಯಕೂಡಲು ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ನಿರಂಜನ ನಿಜೈಕ್ಯವದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.