Index   ವಚನ - 1153    Search  
 
ಮುಗ್ಧನಾಗಿ ಮುಕ್ತಿಯ ಪಡೆಯಬೇಕೆಂದು ಸ್ಥೂಲತತ್ವದ ಇಂದ್ರಿಯಂಗಳೆಲ್ಲ ಸೂಕ್ಷ್ಮತತ್ವದ ಕರಣಂಗಳ ಕೈಯಲ್ಲಿ ವಿಷಯಂಗಳೆಂಬ ಕಾರಣತತ್ವದ ಮೂಲದಲ್ಲಿ ಭ್ರಾಂತಿ ದುಸ್ಸಾರದೊಳು ಮುಳುಗಿ ತೇಕಾಡುತ್ತಿಹ ಸಕಲ ಗಂಜಳದ ಗುಂಜುವಾಗಿಹವು. ಇಂತು ಭರಿತವಾದ ಸೋಂಗಿಗನು ಆಯಾಸಗೊಂಡು ಸುಮ್ಮನಿರ್ದಡೆ ಮುಗ್ಧವಾದಾನೆಯೆ? ಆಗನು. ನಾಲಿಗೆ ಬಿದ್ದಂದು ಬಾಯಿಮುಗ್ಧ, ಕಂಗಳು ಹೋದಂದು ನೋಟಮುಗ್ಧ, ಕರ್ಣದ್ವಾರ ಕಟ್ಟಿದಂದು ಕಿವಿಮುಗ್ಧ, ಕಾಲ ಕೂಡಿದಂದು ಸರ್ವಾಂಗಮುಗ್ಧ. ಹೀಗಲ್ಲ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮಲ್ಲಿ ಅಜಗಣ್ಣನೊಬ್ಬನೆ ಮುಗ್ಭನು.