Index   ವಚನ - 1159    Search  
 
ದಿವದೊಳಗೆ ದ್ಯುಮಣಿಯೊಪ್ಪಿ ತೋರುತ್ತಿಹುದು. ರಜನಿಯೊಳಗೆ ತಾರಾಪತಿಯೊಪ್ಪಿ ತೋರುತ್ತಿಹುದು. ಗಣತಿಂತಿಣಿಯೊಳಗೆ ಶಿವಾನುಭಾವವೊಪ್ಪಿ ತೋರುತ್ತಿಹುದು. ಗುರುನಿರಂಜನ ಚನ್ನ ಬಸವಲಿಂಗದೊಳಗೆ ಎನ್ನ ಮನವೊಪ್ಪಿ ತೋರುತ್ತಿಹುದು.