Index   ವಚನ - 1161    Search  
 
ಮೂರುಲಕ್ಷದ ಮೇಲೆ ತೊಂಬತ್ತಾರುಸಾವಿರ ಶಿವತಿಂಥಿಣಿಯೆಲ್ಲ ಶಿವಾನುಭಾವವ ಮಾಡುವನ್ನಕ್ಕರ, ಕಲ್ಯಾಣದೊಳಗೆ ಕಾಣಬಾರದ ಕಾರ್ಯವ ಕಂಡು ಮಾಡಿದೆ, ಕೇಳಬಾರದ ಮಾತುಮಥನಿಸಿದೆ, ನೋಡಬಾರದ ನೋಟದೊಳಗೆ ನೋಡಿಯಾಡಿದೆ. ಅನುಭಾವದಂಗವ ಮರೆದು ನಿಂದಲ್ಲಿ ಗುರುನಿರಂಜನ ಚನ್ನಬಸವಲಿಂಗವೆಂಬ ನಾಮ ನಿರ್ನಾಮವಾಯಿತ್ತು.