Index   ವಚನ - 1166    Search  
 
ಸದ್ಭಾವಸಂಬಂಧವೆಂಬುದು ಸಾಮಾನ್ಯವೇ ಕೇಳಾ. ಒಂದುಲಕ್ಷ ಶ್ರದ್ಧೆಯುತಭಕ್ತಿಯನೆಸಗಿದರಿಲ್ಲ, ಒಂದುಲಕ್ಷ ನಿಷ್ಕಾಯುತಭಕ್ತಿಯನೆಸಗಿದರಿಲ್ಲ, ಒಂದುಲಕ್ಷ ಸಾವಧಾನಯುತಭಕ್ತಿಯನೆಸಗಿದರಿಲ್ಲ. ಒಂದುಲಕ್ಷ ಅನುಭಾವಯುತಭಕ್ತಿಯನೆಸಗಿದರಿಲ್ಲ. ಒಂದುಲಕ್ಷ ಆನಂದಯುತಭಕ್ತಿಯನೆಸಗಿದರಿಲ್ಲ. ಒಂದುಲಕ್ಷ ಸಮರಸಯುಕ್ತಭಕ್ತಿಯನೆಸಗಿದರಿಲ್ಲ. ಗುರುನಿರಂಜನ ಚನ್ನಬಸವಲಿಂಗವಾದ ನಿಜವಾದ.