ವಾಯುಭೂತ ಕರಣೇಂದ್ರಿಯವಿಷಯವೆಂಬ
ಪಂಚಪಂಚತತ್ವ ಪದಾರ್ಥಗಳೆಂಬುದೊಂದು ಭಾವ.
ತಾನೆಂಬುದೊಂದು ಭಾವ, ಇದಿರೆಂಬುದೊಂದು ಭಾವ,
ಕೊಡಬೇಕೆಂಬುದೊಂದು ಭಾವ, ಕೊಳ್ಳಬೇಕೆಂಬುದೊಂದು ಭಾವ.
ಈ ಭಾವಂಗಳೈದರ ತೋರಿಕೆಯನರಿದು ಮರೆದಲ್ಲಿ
ಮಹಾಮಹಿಮ ಗುರುನಿರಂಜನ
ಚನ್ನಬಸವಲಿಂಗ ತಾನಾದ ಶರಣ.
Art
Manuscript
Music
Courtesy:
Transliteration
Vāyubhūta karaṇēndriyaviṣayavemba
pan̄capan̄catatva padārthagaḷembudondu bhāva.
Tānembudondu bhāva, idirembudondu bhāva,
koḍabēkembudondu bhāva, koḷḷabēkembudondu bhāva.
Ī bhāvaṅgaḷaidara tōrikeyanaridu maredalli
mahāmahima guruniran̄jana
cannabasavaliṅga tānāda śaraṇa.