Index   ವಚನ - 1171    Search  
 
ಮನವರಿಯದ ಬುದ್ಧೇಂದ್ರಿಯ ವಿಷಯಪಂಚಕವಿಲ್ಲ. ಮನವರಿಯದ ಕರ್ಮೇಂದ್ರಿಯ ವಿಷಯಪಂಚಕವಿಲ್ಲ. ಮನವರಿಯದ ಮತ್ತೇನನುವಿಲ್ಲ. ಇದು ಕಾರಣ ಮನೋಮೂರ್ತಿ ಮಹಾಲಿಂಗ ತಾನೆಂದರಿದ ಮಹಿಮಂಗೆ ಮತ್ತೆ ಅರಿವೆಂದರೇನು ಅರ್ಪಿತವೆಂದರೇನು ಅನರ್ಪಿತವೆಂದರೇನು? ಸಂಶಯಕೆ ಸಂಬಂಧ ಕಾಣಾ ಇದು ಗುರುನಿರಂಜನ ಚನ್ನಬಸವಲಿಂಗಾ.