Index   ವಚನ - 1180    Search  
 
ಸಮ್ಮುಖ ಸಾಕಾರ ಹುಸಿಯೆಂಬುದ ತನುವಿಡಿದು ಕಂಡು, ತನು ಹುಸಿಯೆಂಬುದ ಮನದಲ್ಲಿ ಕಂಡು, ಮನ ಹುಸಿಯೆಂಬುದ ವಿವೇಕವಿಡಿದುಕಂಡು, ವಿವೇಕದ ಮುಂದೆ ಅವಿವೇಕವೆಂಬುದ ಆತ್ಮಜ್ಞಾನದಿಂದ ಕಂಡು, ಆತ್ಮ ಪರಮಾತ್ಮವೆಂಬ ಉಭಯ ಭಾವ ಭ್ರಾಂತಿಯೆಂದು ಕಂಡು, ಕಂಡ ಮಂಡಲ ಕಾರಣಮೂರ್ತಿ ತಾನೆಂದು ಮರೆದಿರುವ ಮಹಾಂತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.