ಕರ್ಮೇದ್ರಿಯ ಪಂಚಕಂಗಳಳಿದುಳಿದುದೇ ಸತ್ತು.
ವಿಷಯಪಂಚಕಂಗಳಳಿದುಳಿದುದೇ ಚಿತ್ತು.
ಧರ್ಮೇಂದ್ರಿಯ ಪಂಚಕಂಗಳಳಿದುಳಿದುದೇ ಆನಂದ.
ವಾಯುಪಂಚಕಂಗಳಳಿದುಳಿದುದೇ ನಿತ್ಯ.
ಕರಣಪಂಚಕಂಗಳಳಿದುಳಿದುದೇ ಪರಿಪೂರ್ಣ.
ಇದು ಕಾರಣ ಈ ಪಂಚವಿಂಶತಿತತ್ವಂಗಳಳಿದುಳಿದಂಗವು ತಾನೇ ಅದು ಶಿವಾಂಗ
ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಂಗ ಕಾಣಾ.