ಸದ್ವಾಸನ ಧರ್ಮಚರಿತೆಯ ವರ್ಮವನುಳಿದು
ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ
ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ.
ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ.
ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು
ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ
ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
Art
Manuscript
Music
Courtesy:
Transliteration
Sadvāsana dharmacariteya varmavanuḷidu
duṣkarmabādheya uriyoḷu toḷaluva bhāva
bhaktitrayada yuktiyanarivudu cōdya kāṇā.
Hiḍida kuruhu hotta hore naḍeva baṭṭe mithya māyā bad'dha nōḍā.
Intirda aruvige kuruhugāṇisadirdanu
nam'ma celuvāṅga prāṇātmapriya
sid'dhaliṅga śaraṇa bhaktasaṅgadalli.
ಸ್ಥಲ -
ಶಿವಾಂಗಸ್ಥಲದ ವಚನಗಳು