Index   ವಚನ - 1221    Search  
 
ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ ಸಧರ್ಮಿಗಳ ಕಂಡು, ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ ಸುಳುಹು ಸೂಕ್ಷ್ಮಗೆಟ್ಟು, ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು. ಮತ್ತೆ ಅವರಂಗಚರಿತೆಯನರಿಯದಿರ್ದನು ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ನಿಜಮಾರ್ಗ ನಿಲುವಿನೊಳಗೆ.