Index   ವಚನ - 1237    Search  
 
ಅಯ್ಯಾ, ಆದ್ಯರು ವೇದ್ಯರು ಸಾಧ್ಯರೆಂಬ ಸದಮಲಾತ್ಮರುಗಳಿಗಲ್ಲದೆ ಸಂಗಸಂಯೋಗ ಸಮರಸಸಂಪದವು ಸಾಮಾನ್ಯವೇ ಹೇಳಾ? ಹಂಗಿನೊಳಗಾಗಿ ಭಂಗದೊಳಗಿರ್ದು ಭವವಿರಹಿತನೊಳು ಸಂತೃಪ್ತರೆಂಬ ಬೆಂಗರ್ವಿಗಳ ಕಂಡು ಪೆರ್ಬಲೆಯೊಳಿಕ್ಕಿ ನಗುತಿರ್ದ ನಮ್ಮ ಚನ್ನತ್ರಿವರ್ಣಲಿಂಗವು ನಿರ್ಮಲಂತರ್ಮುಖಿಗಳೊಡವೆರೆದು.