Index   ವಚನ - 10    Search  
 
ಸಜ್ಜನ ಶುದ್ಧ ಶಿವಾಚಾರದಲ್ಲಿ ಆಚರಿಸುವುದೆ ಪಂಚಾಂಗ. ಅಂಗದಾಸೆ ಹಿಂದುಮಾಡಿ, ಲಿಂಗನೆನಹು ಮುಂದುಗೊಂಡು, ಸಕಲ ಪದಾರ್ಥವ ಇಷ್ಟಲಿಂಗಕ್ಕೆ ಕೊಟ್ಟು ಆ ಲಿಂಗಪ್ರಸಾದಶೇಷವ ಸಾವಧಾನದಿಂದ ಸರ್ವಾಂಗದಲ್ಲಿ ಸಂಬಂಧಿಸುವುದೆ ಪಂಚಾಂಗ. ಇದನರಿಯದೆ ತನ್ನ ಲಿಂಗಪ್ರಸಾದವ ಬಿಟ್ಟು, ಭೂಪ್ರತಿಷ್ಠೆಗುಳ್ಳ ಭವಿಶೈವದ ಪ್ರಸಾದವ ವಿಪ್ರರ ಕೈಯಲ್ಲಿ ಇಸಗೊಂಡವರಿಗೆ ಪುಳುಗೊಂಡದೊಳಗೆ ಮುಳುಗಿಸಿ ಬಿಡುವನು ನೋಡಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.