ಅಜ್ಞಾನದಿಂದ ಮೋಕ್ಷಕರ್ತೃ ಇಲ್ಲವೆಂದು
ಸುಜ್ಞಾನಕ್ಕೆ ಗುರುವಿನ ದಯವಾಗಿ,
ಸಕೀಲವರಿಯಲಾಗಿ ಒಂಬತ್ತು ಬಾಗಿಲ ಮುಚ್ಚಿ
ಒಳಯಕ್ಕೆ ಒಬ್ಬರನೂ ಬಿಡಬೇಡೆಂದು
ಒಮ್ಮನ ಮಾಡು, ಸುಮ್ಮನೆ ನೀಡು,
ಗಮ್ಮನೆ ಕಳುಹು ಎಂದರು.
ಮುಂದೆ ನಮ್ಮ ದೇವನ ಬಳಿಯಲ್ಲಿ
ಸಂಭ್ರಮದ ಪೂಜೆಯಾಗಿಟ್ಟ ಎಡಬಲನ ಮುರಿದು
ಬೀಗದ ಕೈಕೊಂಡು ಕುಂಭಿನಿ ಬಾಗಿಲ ಕದವ ತೆಗೆದು,
ಒಳಪೊಕ್ಕು ಒಂದಾನೊಂದು ಕಟ್ಟಳೆಯ ಮಾಡಿ
ಪರತತ್ವದಲ್ಲಿ ಬೆರಸಿದ ನಿಷ್ಠಕ್ಕೆ ದೇವನೆಂದು
ನಮೋ ನಮೋ ಎಂದು ನಂಬುವರು ಕಾಣಾ
ಎಂದು ನುಡಿವ ಮದೃಷ್ಟವುಳ್ಳವರು
ದೃಷ್ಟಿಯಲಿ ನೋಡಿದುದೆಲ್ಲ ಲಯದಲ್ಲಿ ಅಡಗಿತು ಕಾಣಾ.
ಲಯವಾದವರಿಗೆ ಇನ್ನೆಲ್ಲಿ ಮುಕ್ತಿಯೋ?
ಲಯಭಯಕ್ಕೆ ವಿರಹಿತನಾಗಿ
ವೇದಾಂತ ಮಹಾನುಭಾವದಿಂದ ತಿಳಿದು
ತನ್ನ ತಾನರಿದು ತಾನಾರೆಂದು
ತಿಳಿದು ತಮ್ಮುವಳಿದು ತಾನಾದ ವರನಾಗನ
ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
Art
Manuscript
Music
Courtesy:
Transliteration
Ajñānadinda mōkṣakartr̥ illavendu
sujñānakke guruvina dayavāgi,
sakīlavariyalāgi ombattu bāgila mucci
oḷayakke obbaranū biḍabēḍendu
om'mana māḍu, sum'mane nīḍu,
gam'mane kaḷuhu endaru.
Munde nam'ma dēvana baḷiyalli
sambhramada pūjeyāgiṭṭa eḍabalana muridu
bīgada kaikoṇḍu kumbhini bāgila kadava tegedu, Oḷapokku ondānondu kaṭṭaḷeya māḍi
paratatvadalli berasida niṣṭhakke dēvanendu
namō namō endu nambuvaru kāṇā
endu nuḍiva madr̥ṣṭavuḷḷavaru
dr̥ṣṭiyali nōḍidudella layadalli aḍagitu kāṇā.
Layavādavarige innelli muktiyō?
Layabhayakke virahitanāgi
vēdānta mahānubhāvadinda tiḷidu
tanna tānaridu tānārendu
tiḷidu tam'muvaḷidu tānāda varanāgana
guruvīrane paran̄jyōti mahāvirakti.