ವಚನ - 1360     
 
ಬತ್ತೀಸಾಯುಧವನು ಅನಂತ ದಿನ ಸಾಧಿಸಿ ಪಿಡಿದರೂ ಕಾದುವುದು ಒಂದೇ ಕೈದು ಒಂದೇ ದಿನ. ಆ ಹಾಂಗೆ-ಫಲ ಹಲವಾದಡೂ ಅರಿವುದೊಂದೇ ಮನ, ಒಂದೇ ಲಿಂಗ! ಆ ಮನವು ಆಲಿಂಗದ ನೆಲೆಯಲ್ಲಿ ನಿಂದು ಸ್ಥಲಲೇಪವಾದ ಮತ್ತೆ ಸ್ಥಲವಿಲ್ಲ ನಿಃಸ್ಥಲವಿಲ್ಲ, ನಿಜ ನೀನೇ ಗುಹೇಶ್ವರಾ.