ಬಸವಣ್ಣಾ, ನಿನ್ನ ಹೊಗಳತೆ ಅಂತಿರಲಿ,
ಎನ್ನ ಹೊಗಳತೆ ಅಂತಿರಲಿ,
ಗುರುವಾಗಬಹುದು ಲಿಂಗವಾಗಬಹುದು
ಜಂಗಮವಾಗಬಹುದು,
ಇಂತೀ ತ್ರಿವಿಧವೂ ಆಗಬಹುದು.
ಚೆನ್ನಬಸವಣ್ಣನಾಗಬಾರದು.
ನಿನ್ನ ಆಚಾರಕ್ಕೆ ಪ್ರಾಣವಾಗಿ,
ಎನ್ನ ಜ್ಞಾನಕ್ಕೆ ಆಚಾರವಾಗಿ
ಈ ಉಭಯ ಸಂಗದ ಸುಖದ ಪ್ರಸನ್ನಕ್ಕೆ
ಪರಿಣಾಮಪ್ರಸಾದಿಯಾಗಿ ಬಂದ ಘನಮಹಿಮನು
ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನಾಗಬಾರದು ಕಾಣಾ
ಸಂಗನಬಸವಣ್ಣಾ.
Transliteration Basavaṇṇā, ninna hogaḷate antirali,
enna hogaḷate antirali,
guruvāgabahudu liṅgavāgabahudu
jaṅgamavāgabahudu,
intī trividhavū āgabahudu.
Cennabasavaṇṇanāgabāradu.
Ninna ācārakke prāṇavāgi,
enna jñānakke ācāravāgi
ī ubhaya saṅgada sukhada prasannakke
pariṇāmaprasādiyāgi banda ghanamahimanu
guhēśvaraliṅgadalli cennabasavaṇṇanāgabāradu kāṇā
saṅganabasavaṇṇā.
Hindi Translation बसवण्णा तेरी प्रशंसा ऐसे रहे, मेरी प्रशंसा वैसे रहे,
गुरु हो सकता है, लिंग हो सकता है, जंगम हो सकता है।
ऐसे त्रिविध भी हो सकते हैं।
तेरा आचार प्राण बने, मेरा ज्ञान आचार बने
इन उभय संग सुख की प्रसन्नता को
परिणामी बने आये घन महिमा
गुहेश्वर लिंग में चेन्नबसवण्णा मत बनना देख
संगनबसवण्णा ।
Translated by: Eswara Sharma M and Govindarao B N