ಬಸಿರೊಳಗಣ ಕೂಸಿಂಗೆ ಬೇರೆ
ಊಟ ಬೇರೆ ಮೀಹ ಉಂಟೆ?
ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು
ಬೇರೆ ಕೊಡುವ ಕೊಂಬ ಪರಿಯೆಂತೊ?
ದೇಹದೊಳಗಿನ ಪ್ರಾಣವ ಬೇರೆ ಮಾಡಿ ಭೋಗಿಸಲುಂಟೆ?
ಅನುಮಾನ ಅಳಿದು ಮಹದಲ್ಲಿ ಮನ ಮುಸುಕಿದ ಬಳಿಕ
ಭಿನ್ನವ ಮಾಡಲುಂಟೆ ಗುಹೇಶ್ವರಾ?
Transliteration Basiroḷagaṇa kūsiṅge bēre
ūṭa bēre mīha uṇṭe?
Jñānavemba garbhadoḷage liṅgavemba śiśuviralu
bēre koḍuva komba pariyento?
Dēhadoḷagina prāṇava bēre māḍi bhōgisaluṇṭe?
Anumāna aḷidu mahadalli mana musukida baḷika
bhinnava māḍaluṇṭe guhēśvarā?
Hindi Translation गर्भ में रहे शिशु को दूसरा खाना, दूसरा स्नान है क्या ?
ज्ञान जैसे गर्भ में लिंग जैसा बच्चा रहते
दूसरे लेने देने की रीति कैसी ?
देह में रहे प्राण को अलग कर भोग सकते ?
अनुमान मिठे महत् में मन छिपने के बाद
भिन्न कर सकते गुहेश्वरा ?
Translated by: Eswara Sharma M and Govindarao B N