ವಚನ - 1396     
 
ಭಕ್ತ ಭಕ್ತನೆಂದೇನು? ಭವಿಗಳ ಮನೆಯಲುಳ್ಳನ್ನಬರ ಭಕ್ತನೆ? ಭಕ್ತ ಭಕ್ತನೆಂದೇನು? ಜಾತಿ ವರ್ಣಾಶ್ರಮ ಕುಲ ಗೋತ್ರ ನಾಮ ಸೀಮೆಯೆಂಬ ಷಡುಭ್ರಮೆ ಕಣ್ಣಲ್ಲಿ ಕವಿದು ಓಲಾಡುವನ್ನಬರ ಭಕ್ತನೆ? ಭಕ್ತ ಭಕ್ತನೆಂದೇನು? ಪಂಚಸೂತಕವುಳ್ಳನ್ನಬರ ಭಕ್ತನೆ? ಭಕ್ತ ಭಕ್ತನೆಂದೇನು? ತನುವಂಚಕ, ಮನವಂಚಕ ಧನವಂಚಕ ಭಕ್ತನೆ? ಅಲ್ಲಲ್ಲ ನಿಲ್ಲು ಮಾಣು. ಇವರು ಸಾವಿಂಗೆ ಸಂಬಳಗುಂಡನಿರಿದು ಕೊಂಬವರು, ಭಕ್ತರಪ್ಪರೆ ಗುಹೇಶ್ವರಾ?