Index   ವಚನ - 1416    Search  
 
ಮಂತ್ರವ ಕಲಿತಡೇನು? ಪುರಶ್ಚರಣೆಯ ಮಾಡಿದಲ್ಲದೆ ಸಿದ್ಧಿಸದು. ಮದ್ದನರಿದು ಫಲವೇನು? ಪ್ರಯೋಗಿಸಿಕೊಂಡಲ್ಲದೆ ಮಾಣದು. ಲಿಂಗವನರಿದಡೇನು? ನೆನೆದಲ್ಲದೆ ಸಿದ್ಧಿಸದು ಕಾಣಾ ಗುಹೇಶ್ವರಾ.