ಮನ ಮನ ಒಂದಾಗಿ
ತನು ತನು ಒಂದಾಗಿ ಬೆರಸಿದ ಬಳಿಕ,
ಕರೆಯಲಿಲ್ಲ ಕಾಲುವಿಡಿಯಲಿಲ್ಲ ಎಂದು ಅರಿದವರು,
ಉಪಚರಿಸಿ ಬರಹೇಳಿದಡೆ ಅದೆ ಕೊರತೆ ನೋಡಾ!
ಅಂಗದ ಕೈಯಲ್ಲಿ ಕ್ರೀ ಇರಲು
ಮಾತಿನಲ್ಲಿ ಅದ್ವೈತವೆಂತಪ್ಪುದೊ?
ಆಗಾಗದ ಮುನ್ನವೆ ತಾನಾದೆನೆಂಬವರಲ್ಲಿಗೆ
ನಮ್ಮ ಗುಹೇಶ್ವರಲಿಂಗವು ಅಡಿಯಿಡುವನಲ್ಲ.
Transliteration Mana mana ondāgi
tanu tanu ondāgi berasida baḷika,
kareyalilla kāluviḍiyalilla endu aridavaru,
upacarisi barahēḷidaḍe ade korate nōḍā!
Aṅgada kaiyalli krī iralu
mātinalli advaitaventappudo?
Āgāgada munnave tānādenembavarallige
nam'ma guhēśvaraliṅgavu aḍiyiḍuvanalla.
Hindi Translation मन मन मिलकर, तन तन एक होकर मिलाने के बाद,
न बुलाया, न पैर पकड कहकर समझे,
उपचारकर बुला कहें तो वही कमी देख।
शरीर के हाथ में क्रिया रही तो बोली में अद्वैत कैसा है ?
उस तरह वैसे न होने के पहले खुद बने कहनेवालों के यहाँ
हमारे गुहेश्वर लिंग पाँव रखनेवाला नहींहै।
Translated by: Eswara Sharma M and Govindarao B N
Translated by: Eswara Sharma M and Govindarao B N