Index   ವಚನ - 5    Search  
 
ಎಲೆ ಅಯ್ಯಾ, ನೀವು ನಿರಾಕಾರವಾಗಿರ್ದಿರಾಗಿ, ಆ ನಿರಾಕಾರವೆ ಪಂಚಮದಲ್ಲಿ ನಿಂದಡೆ ನಾದ ತೋರಿತ್ತು. ಆ ನಾದದಲ್ಲಿ ಬಿಂದು ತೋರಿತ್ತು. ಆ ನಾದ ಬಿಂದುಗಳನೊಡೆದು ಮೂಡಿ, ನಿರುಪಾಧಿಕ ಜ್ಯೋತಿಯಂತೆ ಸಕಲ ನಿಃಕಲ ರೂಪಾದಿರಯ್ಯ. ರವಿಕೋಟಿ ತೇಜ ಪರಿಪೂರ್ಣ ಮೂಲಚೈತನ್ಯ ರೂಪು ನೀವು ಕಂಡಯ್ಯ. ಭೇದಿಸಬಾರದಭೇದ್ಯ ಸಾಧಿಸಬಾರದಸಾಧ್ಯ ನೀವು ಕಂಡಯ್ಯ. ನಿಮ್ಮ ಸಹಜದ ನಿಲವನಾರು ಬಲ್ಲರು? ನಿಮ್ಮಿಂದ ನೀವೇ ರೂಪಾದಿರಯ್ಯ. ನಿಮ್ಮ ಪರಿಣಾಮಪದದಲ್ಲೊಂದನಂತಕಾಲವಿರ್ದಿರಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.