Index   ವಚನ - 7    Search  
 
ಚಿತ್ತೆಂಬಿತ್ತು ಬಲಿದು ಕಲೆಯಂಕುರಿಸಿದಲ್ಲಿ, ನಿಮಗೆ ತ್ರಿವಿಧನಾಮ ಸೂಚನೆಯಾಯಿತ್ತು. ನಿಮ್ಮ ನಾಮದ ಬೆಂಬಳಿಯಲ್ಲಿ ನಿಮ್ಮ ಶಕ್ತಿ. ಇಚ್ಛಾ ಜ್ಞಾನ ಕ್ರಿಯಾಶಕ್ತಿ ರೂಪಾದ ನಾನಾಶಕ್ತಿ ಭೇದವಾಗಿ, ಅಂದು ನಿಮಗೆ ಚಂದ್ರಧರಾದಿ ಸ್ಥಾಣು ಕಡೆಯಾದ ನಾನಾ ಲೀಲೆಗಳಾದವು. ಆ ನಿಮ್ಮಿಬ್ಬರಿಂದ ರುದ್ರಾವತಾರಗಳಾದವು. ನಿಮ್ಮ ಬೆರಗಿನ ಲೀಲೆಯ ಬಲ್ಲವರಾರಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?