Index   ವಚನ - 12    Search  
 
ಆದಿಯಲ್ಲಿ ನಾನು ಲಿಂಗದಲ್ಲಿ ಉದಯವಾದ ಕಾರಣ ಎನ್ನಾದಿ ಪಿಂಡವ ತಿಳಿದೆನು. ಆದಿ ಪಿಂಡ ಅನಾದಿ ಪಿಂಡವ ಕೂಡಿದ ಕಾರಣ ಬಿಂದು ಪಿಂಡ ಉದಯವಾಯಿತ್ತು. ಆ ಬಿಂದು ಪಿಂಡದಾದಿವಿಡಿದು ನೋಡಲು ಅನಾದಿ ಶಿವತತ್ವ ದ್ವಾರದಿಂದ ಬಂದೆನೆಂದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.