ಸಂಸಾರವೆಂಬ ಮಹಾಘೋರಾರಣ್ಯದಲ್ಲಿ
ಹೊಲಬುಗೆಟ್ಟು, ನೆಲೆಯ ಕಾಣದೆ ಹೋದರು.
ನಿಜದ ಹೊಲಬುದಪ್ಪಿ ಬಳಲುತ್ತಿದ್ದಾರೆ ನೋಡಯ್ಯ.
ಇರುಳುಹಗಲೆನ್ನದೆ ಸಂಸಾರದಲ್ಲಿ ಸಾವುತ್ತಿದ್ದಾರೆ ನೋಡಯ್ಯ.
ಇಂತಪ್ಪ ಸಂಸಾರಾರಣ್ಯದಲ್ಲಿ, ಹೊಲಬುಗೆಟ್ಟು
ನೆಲೆಯ ಕಾಣದೆ ಹೋದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮನರಿಯದೆ.
Art
Manuscript
Music
Courtesy:
Transliteration
Sansāravemba mahāghōrāraṇyadalli
holabugeṭṭu, neleya kāṇade hōdaru.
Nijada holabudappi baḷaluttiddāre nōḍayya.
Iruḷuhagalennade sansāradalli sāvuttiddāre nōḍayya.
Intappa sansārāraṇyadalli, holabugeṭṭu
neleya kāṇade hōdaru,
nijaguru svatantrasid'dhaliṅgēśvara nim'manariyade.