Index   ವಚನ - 28    Search  
 
ಸಂಸಾರ ವಿಷಯರಸವೆಂಬ ಕಾಳಕೂಟ ಹಾಲಾಹಲವಿಷವ ಕೊಂಡವರಾರಾದರೂ ಜೀವಿಸಿದವರುಂಟೆ? ಇಲ್ಲವಾಗಿ. ಎಲ್ಲರೂ ಸಂಸಾರ ವಿಷಯರಸದಲ್ಲಿ ಸಾವುತ್ತೈದಾರೆ. ಆ ವಿಷಯದ ಗಾಳಿ ಸೋಂಕಿ ಬಳಲುತ್ತಿದ್ದೇನಯ್ಯ. ನಿಮ್ಮ ಕೃಪಾಪ್ರಸಾದವೆಂಬ ನಿರ್ವಿಷವ ಕೊಟ್ಟು ರಕ್ಷಿಸಯ್ಯ ಎನ್ನ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.