Index   ವಚನ - 37    Search  
 
ಮನವಿದೊಮ್ಮೆ ಪ್ರಪಂಚದತ್ತ ಹರಿವುದು. ಒಮ್ಮೆ ಪರಮಾರ್ಥದತ್ತ ತಿರುಗುವುದು. ಒಂದ ಹಿಡಿಸಿ, ಒಂದ ಬಿಡಿಸುವುದು. ಇಂತೀ ಸಂದೇಹವನಿಕ್ಕಿ ದಂದುಗಗೊಳಿಸಿ ಮುಂದುಗೆಡಿಸಿ ಕಾಡುತ್ತಿದೆ. ಈ ಮನದ ಮರುಳತನವ ಬಿಡಿಸಿ, ನಿಮ್ಮ ಶ್ರೀಪಾದದಲ್ಲಿರಿಸೆನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.