Index   ವಚನ - 53    Search  
 
ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ. ಅಂಧಕಾರದ ಗುಹೆಯೊಳಗಿರ್ದವರಂತಿರ್ದರಯ್ಯ ಜೀವರೆಲ್ಲ. ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿರ್ದರಯ್ಯ. ಅಡವಿಯ ಹೊಕ್ಕ ಶಿಶುವಿನಂತೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಕರುಣವಾಗುವನ್ನಕ್ಕ, ಬಳಲುತ್ತಿರ್ದರಯ್ಯ ಹೊಲಬರಿಯದೆ.