Index   ವಚನ - 58    Search  
 
ಸಂಸಾರವೆಂಬ ಮಹಾವ್ಯಾಧಿ ಬಾಧಿಸಿ, ನಡೆವೆಣನ ಮಾಡಿ ಕಾಡುತ್ತಿದೆ ನೋಡಯ್ಯ. ಮುಂದೆ ಸತ್ಪಥದಲ್ಲಡಿಯಿಡಲು ಶಕ್ತಿಯಿಲ್ಲದವನ ಮಾಡಿ, ಕಾಡುತ್ತಿದೆ ನೋಡಯ್ಯ. ಶಿವನೆ, ನಿನ್ನ ನಾ ಬೇಡಿಕೊಂಬೆನು. ನೀನೇ ಶ್ರೀಗುರುವೆಂಬ ವೈದ್ಯನಾಗಿ ಬಂದು, ಕೃಪಾಪ್ರಸಾದವೆಂಬ ಮದ್ದ ಕೊಟ್ಟು, ಪಂಚಾಕ್ಷರಿಯೆಂಬ ಪಥ್ಯವನೆರೆದು, ಸಂಸಾರವೆಂಬ ವ್ಯಾಧಿಯ ಮಾಣಿಸಯ್ಯ ನಿಮ್ಮ ಧರ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.