Index   ವಚನ - 63    Search  
 
ಶಿವನೆ ತಾನೆನಗೆ ಗುರುವಾಗಿ ಬಂದು, ಎನ್ನ ಸಂಸಾರಸಾಗರವ ದಾಂಟಿಸಿ, ಅಖಂಡ ಪರಮ ಚೈತನ್ಯ ಶಿವಲಿಂಗವ ವಿಶ್ವದೊಳಗೆಲ್ಲಿಯೂ ಕಾಬಂತೆ ತೋರಿಸಿ, ವಿಶ್ವವ ಲಿಂಗದೊಳಗೆ ತೋರಿ, ಲಿಂಗವೆನ್ನಂಗದೊಳಹೊರಗೆ ತೋರಿ, ಅಂಗವ ಲಿಂಗದೊಳಗಿರಿಸಿ, ರಕ್ಷಿಸಿದನಯ್ಯ ಎನ್ನ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.