Index   ವಚನ - 79    Search  
 
ಶ್ರೀ ವಿಭೂತಿಯನೊಲಿದು ಧರಿಸಲು, ಸಕಲದುರಿತವ ನಿವಾರಣವ ಮಾಡಿ, ಘನಸುಖವ ಕೊಡುವುದು ನೋಡಾ. ಪ್ರಣವದ ಬೆಳಗು, ಪಂಚಾಕ್ಷರಿಯ ಕಳೆ, ಪರಮನಂಗಚ್ಛವಿ ಶ್ರೀವಿಭೂತಿ ನೋಡಾ. ಶಾಂತಿಯ ನೆಲೆವನೆ, ಸರ್ವರಕ್ಷೆಯ ತವರೆನಿಸಿ, ಸಮಸ್ತ ಕಾಮಿತ ಸುಖವೀವುದು ಶ್ರೀವಿಭೂತಿ ನೋಡಾ. ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಅಪಸ್ಮಾರ ಬಾಧೆಯ ಬಿಡಿಸಿ ನಿಜಸುಖವಿತ್ತು ಸಲಹುವುದು ಶ್ರೀ ವಿಭೂತಿ ನೋಡಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದ ವಿಭೂತಿ ನೋಡಾ.