ರೂಪು ಕುರೂಪು ವಿಕಾರಂಗಳು
ಮುಕುರವ ನೋಡುವರ ಗುಣವಲ್ಲದೆ
ಮುಕುರಕ್ಕೆ ವಿಕಾರಗುಣವುಂಟೆ?
ಪಾಪಿಗಳು ಕೋಪಿಗಳು ಪರಿಭ್ರಷ್ಟರು
ಅಸತ್ಯರು ಅಜ್ಞಾನಿಗಳು
ಸಂಸಾರಿಗಳು ದುರ್ವಿಕಾರಿಗಳು ಲಂಡರು ಕೊಂಡೆಯರು
ಕುಚಿತ್ತರು ಅನ್ಯಾಯಕಾರಿಗಳು
ತಮ್ಮ ತಮ್ಮ ಗುಣದಂತೆ ತಿಳಿದು ನೋಡಿ ಮಾಡಿದರು
ಬಿತ್ತಿದ ಬೆಳೆಯನುಂಬಂತೆ.
ನಿಂದಿಸಿದವರು ಪಾಪದ ಫಲವನನುಭವಿಸುವರು.
ಸ್ತುತಿಸಿದವರು ಪುಣ್ಯದ ಫಲವನನುಭವಿಸುವರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಸತ್ಯಶರಣ
ನಿತ್ಯಮುಕ್ತಂಗೆ, ನಿಂದೆ ಸ್ತುತಿಯೆಂಬೆರಡೂ ಇಲ್ಲ.
Art
Manuscript
Music
Courtesy:
Transliteration
Rūpu kurūpu vikāraṅgaḷu
mukurava nōḍuvara guṇavallade
mukurakke vikāraguṇavuṇṭe?
Pāpigaḷu kōpigaḷu paribhraṣṭaru
asatyaru ajñānigaḷu
sansārigaḷu durvikārigaḷu laṇḍaru koṇḍeyaru
kucittaru an'yāyakārigaḷu
tam'matam'ma guṇadante tiḷidu nōḍi māḍidaru
bittida beḷeyanumbante.
Nindisidavaru pāpada phalavananubhavisuvaru.
Stutisidavaru puṇyada phalavananubhavisuvaru.
Nijaguru svatantrasid'dhaliṅgēśvara, nim'ma satyaśaraṇa
nityamuktaṅge, ninde stutiyemberaḍū illa.