Index   ವಚನ - 100    Search  
 
ವಾಹನವನೇರುವಾಗ ದಾರವ ಹಿಡಿದು ನಡೆಸಲು ವಾಹಕನಿಚ್ಛೆಯಲ್ಲಿ ನಡೆವುದು ವಾಹನ. ಹಾಗೆ ದೇಹ ಧರ್ಮದಿಚ್ಛೆಯಲ್ಲಿ ಹೋಗದೆ ತನ್ನ ವಶಕ್ಕೆ ತಂದು ನಡೆಸಬೇಕು ಭಕ್ತನಾದಡೆ. ಅಂತಲ್ಲದೆ ದೇಹಧರ್ಮ ತನ್ನಿಚ್ಚೆಗೆ ಬಾರದೆಂಬವ, ದೇಹಭಾರವ ಹೊತ್ತು ತೊಳಲುವ ಭೂಭಾರಕನಲ್ಲದೆ, ಆತ ಭಕ್ತನಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.